ಜೀವಿ ಮತ್ತು ಜೀವಿ ವೈವಿಧ್ಯ
ಯಂತ್ರಜೀವಿ ಅಥವಾ ರೇಬೊಟ್‍ಗಳನ್ನು ಮಾನವ ಸೃಷ್ಟಿಸಿದ್ದಾನೆ. ಜೀವಿಗಳಲ್ಲಿರುವಂತೆ ಅವುಗಳಿಗೆ ಕೈಕಾಲುಗಳಿವೆ, ಕ್ಯಾಮರಾ ಕಣ್ಣು, ಸೋನಾರ್ ಕಿವಿಗಳು, ಸಂವೇದನಾ ವಾಹಕ ಸ್ಪರ್ಶೀಂದ್ರಿಯ, ಘ್ರಾಣಶಕ್ತಿ, ಕಂಪ್ಯೂಟರ್ ಮಿದುಳು, ಪರಿಸರಕ್ಕೆ ಹೊಂದಿಕೊಂಡು ಸ್ಪಂದಿಸಬಲ್ಲ ನಡವಳಿಕೆ - ಹೀಗೆ ಜೀವದ ಹಲವಾರು ಲಕ್ಷಣಗಳನ್ನು ಕೇಳಬಲ್ಲವು. ಹಾಗಾದರೆ ರೋಬೋಟ್‍ಗಳು ಜೀವಿಗಳೇ ? ಇವು ಯಾಂತ್ರಿಕ ಜೀವನ ನಡೆಸುವ ಯಂತ್ರ ಜೀವಿಗಳಷ್ಟೇ. ಹಾಗಾದರೆ ನಿಜ ಅರ್ಥದಲ್ಲಿ ಜೀವಿಗಳೆಂದರೇನು ? ಈ ಪ್ರಶ್ನೆಗೆ ಮತ್ತಷ್ಟು ಪ್ರಶ್ನೆ ಕೇಳಬಹುದು:
ವೈರಸ್ ಜೀವಿಯೇ ?
ವೈರಸ್‍ಗಳು ಸ್ವತಂತ್ರವಾಗಿ ಜೀವಿಸಲಾರವು ಯಾವುದೇ ಜೀವಿಯ ಕೋಶಗಳಿಗೆ ತಮ್ಮ ಚಟುವಟಿಕೆ ತೋರಬಲ್ಲವು. ಹಾಗಾಗಿ ಇವನ್ನು 'ಜೀವಂತ ರಾಸಾಯನಿಕ ವಸ್ತು" ಎನ್ನಬಹುದು. ರಾಸಾಯನಿಕ ವಸ್ತುವನ್ನು ಜೀವಿ ಎನ್ನಬಹುದಾದರೆ,
ಕಿಣ್ವಗಳು ಜೀವಿಗಳೇ ?
ಕಿಣ್ವಗಳು ಜೈವಿಕ ವೇಗವರ್ಧಕಗಳು. ಇವನ್ನು ಕೋಶಗಳಿಂದ ಬೇರ್ಪಡಿಸಿ, ಪ್ರನಾಳದಲ್ಲಿ ಅವುಗಳಿಗೆ ಬೇಕಾದ ಸೂಕ್ತ ವಾತಾವರಣ ಕಲ್ಪಿಸಿದರೆ ರಾಸಾಯನಿಕ ಕ್ರಿಯೆ ನಡೆಸುವುವು. ಆದರೂ ಕಿಣ್ವಗಳನ್ನು ಜೀವಿ ಎಂದು ಪರಿಗಣಿಸಲಾಗದು.
ರೋಬೋಟ್ ಮಾನವ ನಿರ್ಮಿತ ಯಂತ್ರಜೀವಿ, ವೈರಸ್ ಜೀವಿ ನಿರ್ಜೀವಿಗಳ ನಡುವಣ ಕೊಂಡಿ ಬೆಸೆಯಬಲ್ಲ ಸೂಕ್ಷ್ಮಾಣು. ಕಿಣ್ವವು ಕೋಶದಿಂದ ಹೊರಬಂದರೂ ರಾಸಾಯನಿಕ ಕ್ರಿಯೆ ನಡೆಸಬಲ್ಲ ಕೋಶಸ್ರವಿಕೆ ರೋಬೋಟ್ ಮತ್ತು ಕಿಣ್ವಗಳು ಸಂತಾನೋತ್ಪತ್ತಿ ಮಾಡಲಾರವು ಹಾಗಾಗಿ ಅವು ಜೀವಿಗಳಲ್ಲ. ಯಾವುದೇ ವಸ್ತು ಜೀವದ ಅನೇಕ ಗುಣ ಲಕ್ಷಣಗಳನ್ನು ತೋರಬಲ್ಲವು, ಜೈವಿಕ ಸಿದ್ಧಾಂತದ ಆಧಾರದ ಮೇಲೆ ಜೀವಿಗಳನ್ನು ಗುರುತಿಸಬಲ್ಲ ಏಕೈಕ ಲಕ್ಷಣ ಸಂತಾನೋತ್ಪತ್ತಿ ಆದರೆ ಅನುಕೂಲಕ್ಕೆ ತಕ್ಕಂತೆ ಬೆರಕೆ ಮಾಡಿ ಹೊಸ ಜೀವಿ ತಳಿಗಳನ್ನು ಸೃಷ್ಟಿಸಿದಾಗ, ಅವು ಸಂತಾನೋತ್ಪತ್ತಿ ಮಾಡಲಾರದು.
ಎಲ್ಲಾ ಜೀವಿಗಳು ತಮ್ಮ ಪ್ರತಿರೂಪಗಳನ್ನು ಸೃಷ್ಟಿಸಲು ಸಾಮಥ್ರ್ಯ ಹೊಂದಿದೆ. ಜೀವಿ ಜೀವಿಸುವ ತಾಣವೇ ಜೀವಗೋಳ.
ಜೀವಗೋಳವು ಭೌಗೋಳಿಕ, ರಾಸಾಯನಿಕ ಮತ್ತು ಭೌತಿಕವಾಗಿ ವ್ಯತ್ಯಾಸಗಳನ್ನು ತೋರುವುದರಿಂದ ಅದು ಏಕರೂಪದ್ದಾಗಿಲ್ಲ. ಹಾಗಾಗಿ ಒಂದು ಪ್ರದೇಶದ ಸ್ಥಿತಿಗತಿಗಳು ಮತ್ತೊಂದರಂತಿಲ್ಲ. ಅಲ್ಲಿಯ ಅಕ್ಷಾಂಶ, ರೇಖಾಂಶ, ಉಷ್ಣತೆ, ಆದ್ರ್ರತೆ, ಮಣ್ಣಿನ ಗುಣ, ನೀರಿನ ಗುಣ, ಒತ್ತಡ - ಹೀಗೆ ಹತ್ತು ಹಲವಾರು ಅಂಶಗಳು ವಿಭಿನ್ನವಾಗಿರುತ್ತವೆ. ಈ ವಿಭಿನ್ನ ಸ್ಥಿತಿಗತಿಗಳನ್ವಯ ಅಲ್ಲಿಯ ಸಸ್ಯಸಂಪತ್ತು ರೂಪುಗೊಳ್ಳತ್ತದೆ. ಈ ಎಲ್ಲಾ ಹಿನ್ನೆಲೆಗೆ ಹೊಂದಿಕೊಳ್ಳಬಲ್ಲ ಪ್ರಾಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಆವಾಸಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ ಅಂದರೆ ಬೌಗೋಳಿಕ ಮತ್ತು ಭೌತಿಕ ಪರಿಸರಗಳು ಅಲ್ಲಿಯ ಜೀವಿಗಳ ಇರುವಿಕೆಗೆ ಒಂದಕ್ಕೊಂದು ಪೂರಕ ಎನ್ನಬಹುದು.
ಜೀವಿಗಳಲ್ಲಿ ಹೊಂದಾಣಿಕೆಯ ಮಾರ್ಪಾಟು ಅತ್ಯದ್ಭುತವಾದದ್ದು. ಅವು ಕೊರೆಯುವ ಚಳಿಯಲ್ಲಿ ಜೀವಿಸಬಲ್ಲವು, ನೀರಿಲ್ಲದ ಬೆಂಗಾಡಿನಲ್ಲಿ ಆವಾಸ ಕಲ್ಪಿಸಿಕೊಳ್ಳಬಲ್ಲವು, ಕತ್ತಲಿನ ರೂಪದ ಗಾಡಾಂಧಕಾರದ ಕಡಲಾಳ, ದಟ್ಟಕಾಡು, ವಿಶಾಲವಾದ ಹುಲ್ಲುಗಾವಲು, ಉಪ್ಪಿನ ಗಾಢತೆಯ ಮೃತಸಮುದ್ರ, ತಿಳಿನೀರಿನ ನದಿ, ಕೆಸರಿನ ತಾಣ, ಬಿಸಿನೀರಿನ ಬಗ್ಗೆ ಒಂದೇ, ಎರಡೇ ಎಂತಹುದೇ ವೈಪರೀತ್ಯದ ಆವಾಸಕ್ಕೂ ಸಮರ್ಥ ಬದಲಾವಣೆ ಮಾಡಿಕೊಂಡು ಬದುಕುವ ಜೀವಿಗಳಿವೆ. ಆವಾಸಕ್ಕೆ ಹೊಂದಿಕೊಂಡಂತೆ ಉಂಟಾದ ಮಾರ್ಪಾಟುಗಳೇ ಬಾಹ್ಯ ಮತ್ತು ಆಂತರಿಕ ರಚನಾ ವ್ಯತ್ಯಾಸಗಳನ್ನು ತರುತ್ತದೆ. ಇದು ಜೀವಿ ವೈವಿಧ್ಯಕ್ಕೆ ನಾಂದಿ ಹಾಕುತ್ತದೆ.
ಜೀವ ನಿರೂಪಣೆಯ ಹಿನ್ನೆಲೆಯಲ್ಲಿ ಜೀವಿ ವೈವಿಧ್ಯವನ್ನು ಮೂರು ಸ್ತರಗಳಲ್ಲಿ ಗುರುತಿಸಬಹುದು. ಅವೇ,
1.	ಜೀವಿಯ ಜೀವಿ ವೈವಿಧ್ಯ	(ಉeಟಿeಣiಛಿ ಃioಜiveಡಿsiಣಥಿ)
2.	ಪ್ರಭೇಧ ಜೀವಿ ವೈವಿಧ್ಯ	(Sಠಿeಛಿies ಃioಜiveಡಿsiಣಥಿ)
3.	ಜೀವಾವಾಸ ಜೀವಿ ವೈವಿಧ್ಯ (ಇಛಿosಥಿsಣem ಃioಜiveಡಿsiಣಥಿ)
ಜೀವಿಯ ಜೀವಿ ವೈವಿಧ್ಯ : - ದೇಶ, ಭಾಷೆ, ಸಂಸ್ಕøತಿ, ಧಾರ್ಮಿಕ ಆಚರಣೆಗಳು, ಆಹಾರ, ಸಂಪ್ರದಾಯ - ಹೀಗೆ ಹತ್ತು ಹಲವಾರು ವ್ಯತ್ಯಾಸಗಳು ಮಾನವರಲ್ಲಿ ಕಂಡುಬರಬಹುದು. ಕೂದಲು, ಕಣ್ಣಿನ ಬಣ್ಣ, ಧರ್ಮ, ಮೂಗು, ತುಟಿಗಳ ಆಕಾರ — ಇಂತಹ ಅನೇಕ ಬಾಹ್ಯ ಲಕ್ಷಣಗಳಲ್ಲೂ ವೈವಿಧ್ಯಮಯ ವ್ಯತ್ಯಾಸಗಳು ಕಾಣಬಹುದು. ಈ ವ್ಯತ್ಯಾಸಗಳಿಗೆಲ್ಲಾ ಪ್ರತಿಯೊಬ್ಬನೂ ಪಡೆದ ಜೀನೋಮ್‍ಗಳ ಕಾರ್ಯ ಸೂಚಿಯೇ ಆಗಿರುತ್ತದೆ. ಇದನ್ನೇ ಅನುವಂಶೀಯ ಜೀವಿ ವೈವಿಧ್ಯ (ಜೀವಿ ಜೀವ ವೈವಿಧ್ಯ) ಎನ್ನುವುದು.
ದಿನಸಿ ಅಂಗಡಿ, ಕಾಯಿ ಪಲ್ಲೆಗಳ ಮಾರುಕಟ್ಟೆಗೆ ಭೇಟಿ ಇಟ್ಟಾಗ ಹಲವಾರು ವಿಧದ ಅಕ್ಕಿ, ಗೋಧಿ, ಬೇಳೆ — ಕಾಳುಗಳನ್ನು, ತರಕಾರಿ, ಹಣ್ಣುಗಳನ್ನು ಗುರುತಿಸಬಹುದು. ಮಾನವ ತನ್ನ ಅನುಕೂಲಕ್ಕೆ ಮತ್ತು ಬಳಕೆಗಾಗಿ ವನ್ಯಜೀವಿಗಳನ್ನು ತನಗೆ ಬೇಕಾದ ರೀತಿಯಲ್ಲಿ ಅನೇಕ ಸಂತರ ತಳಿಗಳನ್ನು ರೂಪಿಸಿರುವುದೂ ಜೀನೀ ಜೀವಿ ವೈವಿಧ್ಯಕ್ಕೆ ಉತ್ತಮ ಉದಾಹರಣೆ. ಕೃಷಿ, ಹೈನುಗಾರಿಕೆ, ಕೋಳಿಸಾಗಣೆ, ಮೀನುಸಾಕಣೆ, ತೋಟಗಾರಿಕೆಗಳಲ್ಲಿ ಇಂತಹ ಹಲವಾರು ಜೀನಿ ವೈವಿಧ್ಯಗಳನ್ನು ಕಾಣಬಹುದು.
ಹೀಗೆ ಒಂದೇ ಪ್ರಬೇಧಗಳನ್ನು ಜೀವಿ ವೈವಿಧ್ಯ ಹಾಗೂ ಒಂದೇ ರೀತಿಯಲ್ಲಿ ಪ್ರಬೇಧವೈವಿಧ್ಯಗಳನ್ನು ಗುರುತಿಸಬಹುದು. ಇದಕ್ಕೊಂದು ಅತ್ಯುತ್ತಮ ಉದಾಹರಣೆ ಮೆಣಸಿನಕಾಯಿ.
ಚಟ್ನಿ, ಸಾಂಬಾರ್, ಪಲ್ಯ, ಹುಳಿ, ಮುಂತಾದ ಎಲ್ಲಾ ಅಡುಗೆಗೂ ಮೆಣಸಿನಕಾಯಿಯ ಅಗತ್ಯವಿದೆ. ಪ್ರಪಂಚದಾದ್ಯಂತ ಈ ಸಾಂಬಾರ ಪದಾರ್ಥ ಬಳಸದ ಅಡುಗೆಮನೆ ಹಾಗೂ ಊಟದ ಮೇಜನ್ನು ಊಹಿಸಲೇ ಸಾಧ್ಯವಿಲ್ಲವೆನ್ನಬಹುದು. ಮೆಣಸಿನ ಕಾಯಿಯನ್ನು ಕೆಂಪು ಮೆಣಸು ಎಂದು ಗುರುತಿಲಾಗಿತ್ತು. ಆದರೆ ಮೆಣಸಿನ ಕಾಯಿಗೂ, ಮೆಣಸಿಗೂ ಯಾವುದೇ ನಿಕಟ ಸಂಬಂಧವಿಲ್ಲ. ಮೆಣಸಿನಕಾಯಿಯಲ್ಲಿ ಅನೇಕ ತಳಿಗಳನ್ನು ಎಬ್ಬಿಸಲಾಗಿದೆ. ಕೆಲವೊಂದು ಸಾಂಬಾರ ಪದಾರ್ಥದಂತೆ ಬಳಸಿದರೆ ಮತ್ತೆ ಕೆಲವನ್ನು ಸಲಾಡ್ ಹಾಗೂ ತರಕಾರಿಯಂತೆ ಬಳಸಲಾಗುತ್ತದೆ. ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನ ಕಾಯಿ, ದೊಣ್ಣೆ ಮೆಣಸಿನ ಕಾಯಿ, ಬಜ್ಜಿ ಮೆಣಸಿನಕಾಯಿ, ಬ್ಯಾಡಗಿ ಮೆಣಸಿನಕಾಯಿ — ಇಂತಹ ಹೆಸರುಗಳು ಎಲ್ಲರಿಗೂ ಚಿರಪರಿಚಿತ. ಮೆಣಸಿನಕಾಯಿಗೆ ತನ್ನದೇ ಆದ ಇತಿಹ್ಯವಿದೆ. ಇದು ಜಗತ್ತಿನೆಲ್ಲೆಡೆ ಇಂದು ಬೆಳೆಯುವ ಸಸ್ಯವಾದರೂ ಇದರ ಮೂಲಸ್ಥಾನ ಮಧ್ಯ ಅಮೆರಿಕಾ ತನ್ನ ಮೂಲಸ್ಥಾನದಿಂದ ಹೊರಬಂದ ಮೆಣಸಿನಕಾಯಿ ಭೌಗೋಳಿಕ ಲಕ್ಷಣ, ಸ್ಥಿತಿ ಗತಿಗಳಿಗೆ ಹೊಂದಿಕೊಂಡು ಮಾರ್ಪಾಡುಗಳನ್ನು ಕಂಡುಕೊಂಡಿದೆ. ಇದರಿಂದಾಗಿ ಮೂಲ ರಚನೆಯಲ್ಲಿ ವ್ಯತ್ಯಾಸವಿಲ್ಲದಿದ್ದರೂ ಬಣ್ಣ, ಆಕಾರ, ಗಾತ್ರ,, ಬಾರದ ತೀಕ್ಷ್ಣತೆ, ರಾಸಾಯನಿಕ ವಸ್ತು ವಿಶೇಷಗಳಿಂದ ಹಲವಾರು ಮಾರ್ಪಾಟುಗಳನ್ನು ತೋರುತ್ತದೆ. ಇವುಗಳಲ್ಲಿ ಎರಡು ಮುಖ್ಯ ವಿಧಗಳನ್ನು ಗುರುತಿಸಬಹುದು. ಒಂದು ಖಾರ ನೀಡಲು ಬಳಸುವ ಬಾರದ ಮೆಣಸಿನಕಾಯಿ. ಮತ್ತೊಂದು ಗಂಟೆಯಾಕಾರದ ತರಕಾರಿಯಂತೆ ಬಳಸುವ ಸಿಹಿ ಮೆಣಸಿನ ಕಾಯಿ ಆಂಗ್ಲಭಾಷೆಯಲ್ಲಿ ಇವನ್ನು ಅhiಟಟi ಮತ್ತು ಅಚಿಠಿsiಛಿum ಎಂದು ಕರೆದರೂ ಈ ಪದಗಳನ್ನು ಕಟ್ಟುನಿಟ್ಟಾಗಿ ಬಳಸುವುದಿಲ್ಲ. ಆದರೆ ವೈಜ್ಞಾನಿಕ ಜಾತಿಯ ಹೆಸರು ಅಚಿಠಿsiಛಿum.
ಇಟಲಿಯ ಸಮುದ್ರಯಾನ ಚತುರ ಕ್ರಿಸ್ಟಫರ್ ಕೊಲಂಬಸ್ 1492 ರಲ್ಲಿ ಭಾರತದ ಪ್ರಸಿದ್ಧ ಸಾಂಬಾರ ಪದಾರ್ಥವಾದ ಮೆಣಸಿನ ಅನ್ವೇಷಣೆಗಾಗಿ ಹಾದಿ ತಪ್ಪಿ ಸೇರಿದ್ದು ಅಮೆರಿಕಾ. ಅಲ್ಲಿ ಬೆಳೆಯುತ್ತಿದ್ದ ಕೆಂಪು ಮೆಣಸಿನ ಕಾಯಿಯನ್ನೇ ಮೆಣಸೆಂದು ತಪ್ಪಾಗಿ ಗುರುತಿಸಿದ. ಅಲ್ಲಿಯ ಮೂಲವಾಸಿಗಳನ್ನು ಇಂಡಿಯನ್ನರೆಂದು ಕರೆದ. ಹೀಗಾಗಿ ಮೆಣಸಿನ ಕಾಯಿಗೆ 'ಕೆಂಪು ಮೆಣಸು (ಖeಜ Peಠಿಠಿeಡಿ) ಹಾಗೂ ಇಂಡಿಯನ್‍ರನ್ನು 'ಕೆಂಪು ಇಂಡಿಯನ್ (ಖeಜ Iಟಿಜiಚಿಟಿs — ಇಂದು ಂmeಡಿiಛಿಚಿಟಿ Iಟಿಜiಚಿಟಿs ) ಎಂದು ಹೆಸರಿಸಲಾಗಿದೆ.
 ಅಚಿಠಿsiಛಿum ' ಜಾತಿಯಲ್ಲಿ ಅನೇಕ ಪ್ರಬೇಧಗಳಿವೆ. ಈ ಪ್ರಬೇಧಗಳ ಸಂತರ ತಳಿಗಳನ್ನು ಎಬ್ಬಿಸಲಾಗಿದೆ. ಇವುಗಳ ವರ್ಣತಂತುಗಳ ದ್ವಿಗುಣಿತ ಸಂಖ್ಯೆ, 2ಟಿ = 24. ಜಗತ್ತಿನಲ್ಲಿ 200 ಕ್ಕೂ ಹೆಚ್ಚಿನ ತಳಿಗಳನ್ನು ಇದು ಕಾಣಬಹುದು. ನಾವು ಸಾಮಾನ್ಯವಾಗಿ ಬಳಸುವ ಉದ್ದ ಮೆಣಸಿನ ಕಾಯಿ ಅಚಿಠಿsiಛಿum ಚಿಟಿಟಿuum ಅಥವಾ ಅಚಿಠಿsiಛಿum iಟಿಜiಛಿum. ತರಕಾರಿಯಂತೆ ಬಳಸುವ ದೋಣ್ಣೆ ಮೆಣಸಿನ ಕಾಯಿ ಅಚಿಠಿsiಛಿum ಜಿಡಿuಣesಛಿeಟಿs. ಇವಲ್ಲದೇ ಅ. ಅhiಟಿeಟಿse, ಅ. Peಟಿಜuಟum, ಅ. Pubesಛಿeಟಿs ಹಾಗೂ ಅ. miಟಿimum ಮುಂತಾದ ಪ್ರಬೇಧಗಳನ್ನು ಗುರುತಿಸಬಹುದು.
ಮೆಣಸಿನ ಕಾಯಿಗಳು ಗಿಡದಲ್ಲಿ ಬಿಟ್ಟಾಗ ಕೆಳಕ್ಕೆ ಬಾಗಿರುವುದು ಸಾಮಾನ್ಯ ಆದರೆ ಕೆಲವೊಂದು ತಳಿಗಳಲ್ಲಿ ಕಾಯಿಗಳು ಮೇಲಕ್ಕೆ ಮುಖಮಾಡಿರುವುದನ್ನು ಕಾಣಬಹುದು. ಇವುಗಳನ್ನು ಸೂರ್ಯಮುಖಿ ಮೆಣಸಿನಕಾಯಿಗಳೆಂದೇ ಕರೆಯಲಾಗಿದೆ. ಆಸ್ಸಾಂ ರಾಜ್ಯದಲ್ಲಿ ಬೆಳೆಯುವ ತೇಜ್‍ಪುರ್ ಮೆಣಸಿನಕಾಯಿ ಜಗತ್ತಿನಲ್ಲೇ ಅತ್ಯಂತ ಬಾರದ ಮೆಣಸಿನ ಕಾಯಿ.
ಮೆಣಸಿನ ಕಾಯಿಯ ಮೂಲ ಜೀನುಗಳನ್ನು ಸಂರಕ್ಷಿಸುವ ಸಲುವಾಗಿ ನ್ಯೂ ಮೆಕ್ಸಿಕೋ ಸ್ಟೇಟ್ ಯೂನಿವರ್ಸಿಟಿಯ ಕಾಲೇಜ್ ಆಫ್ ಅಗ್ರಿಕಲ್ಚರ್ ಅಂಡ್ ಹೋಂ ಎಕನಾಮಿಕ್ಸ್‍ನಲ್ಲಿ ಚಿಲಿ ಇನ್ಸಿಟ್ಯೂಟ್ ಎಂಬ ವಿಭಾಗವೇ ತೆರೆಯಲಾಗಿದೆ. ಅಂದರೆ ಬರೀ ಒಂದು ಮೆಣಸಿನ ಕಾಯಿಯ ವೈವಿಧ್ಯವೇ ಈ ತೆರನಾದರೆ ಜೀವ ಜಗತ್ತಿನಲ್ಲಿ ಕಾಣ ಬರುವ ಜೀವಿ ವೈವಿಧ್ಯ ಇನ್ನೆಷ್ಟಿರ ಬಹುದೆಂದು ಊಹಿಸಬಹುದು.
ಭಾರತದಲ್ಲಿ ಬೆಳೆಯುವ ಕೆಲವು ವಿಧದ ಮೆಣಸಿನ ಕಾಯಿಗಳ ಹೆಸರು, ಬೆಳೆಯುವ ಪ್ರದೇಶ ಮತ್ತು ಇವುಗಳ ವಿಶೇಷ ಲಕ್ಷಣಗಳಿಗಾಗಿ ಪಟ್ಟಿನೋಟಿ. ವೈವಿಧ್ಯ ಮೆಣಸಿನ ಕಾಯಿ ಬೆಳೆಗಳನ್ನು ಆಂಧ್ರಪ್ರದೇಶದಲ್ಲಿ ಕಾಣಬಹುದು.
1680 ರಲ್ಲೇ ರಾಬರ್ಟ್ ಮಾರಿಸನ್ ತನ್ನ ಪುಸ್ತಕ " Pಟಚಿಟಿಣಚಿಡಿum ಊisಣಡಿiಚಿಟ Uಟಿiveಡಿsಚಿಟis ಔxoಟಿieಟಿsis " ನಲ್ಲಿ 33 ಪ್ರಭೇದದ ಮೆಣಸಿನಕಾಯಿ ಪಟ್ಟಿಮಾಡಿದ್ದಾನೆ. ಈಗ ಹೊಸ ತಂತ್ರಜ್ಞಾನಗಳನ್ನು ಬಳಸಿ ವೈವಿಧ್ಯಮಯ ಬಣ್ಣದ ಮೆಣಸಿನಕಾಯಿಗಳನ್ನು ಬೆಳೆಸಿರುವುದನ್ನು ಯಾವುದೇ ಮಾರುಕಟ್ಟೆಯಲ್ಲಿ ಕಾಣಬಹುದು.
ಭಾರತದಲ್ಲಿ ಬೆಳೆಯುವ ಕೆಲವು ಮಾದರಿ ಮೆಣಸಿನಕಾಯಿ ತಳಿಗಳು
ಹೆಸರು
ಬೆಳೆಯುವ ಪ್ರದೇಶ
ವಿಶೇಷ ಲಕ್ಷಣಗಳು

ಧಾನಿ
ಮಿಜೀರಾಮ್, ಮಣಿಪುರ
ಕೇಸರಿ ಕೆಂಪು, ಅತ್ಯಂತ ಖಾರ

ಸನ್ನಾಮ್
ಮಹಾರಾಷ್ಟ್ರ, ಆಂಧ್ರಪ್ರದೇಶ ಮಧ್ಯ ಪ್ರದೇಶ.
ಕೆಂಪು, ಅತಿಖಾರ

ನಲ್‍ಚೆಟಿ
ಮಹಾರಾಷ್ಟ್ರ
ಕೆಂಪು, ಖಾರ

ಮುಂಡು
ತಮಿಳುನಾಡು, ಆಂಧ್ರಪ್ರದೇಶ
ಹಳದಿ ಮಿಶ್ರಿತ ಕೆಂಪು, ಸಾಧಾರಣ ಖಾರ

ಮದ್ರಾಸ್ ಪಾರಿ
ಆಂಧ್ರ ಪ್ರದೇಶ
ಹೊಳಪಿನ ಕೆಂಪು, ಖಾರ

ತಾಡಪಲ್ಲಿ
ಆಂಧ್ರ ಪ್ರದೇಶ
ಕೆಂಪು ದಪ್ಪ, ಹೆಚ್ಚು ಖಾರವಿಲ್ಲ

ಬ್ಯಾಡಗಿ
ಕರ್ನಾಟಕ
ಕೆಂಪು, ಕಡಿಮೆ ಖಾರ

ಕಂತಾರಿ
ಕೇರಳ, ತಮಿಳುನಾಡು
ದಂತದ ಬಿಳಿ, ಚಿಕ್ಕದು ಚುರುಕು ಖಾರ

ಜ್ವಾಲಾ
ಗುಜರಾತ್.
ತಿಳಿಕೆಂಪು, ಚುರುಕುಖಾರ

ಕಾಶ್ಮೀರಿ ಮಿಚ್ಮ್
ಹಿಮಾಲಯ ಪ್ರದೇಶ, ಜಮ್ಮು, ಕಾಶ್ಮೀರ್
ಗಾಢ ಕೆಂಪು, ತಿಳಿಖಾರ

ಹಿಂದುಪುರ್
ಆಂಧ್ರ ಪ್ರದೇಶ.
ಕೆಂಪು, ಚುರುಕು ಖಾರ

ಜೀವಜಗತ್ತಿನಲ್ಲಿ ಒಟ್ಟು ಎಷ್ಟು ಪ್ರಬೇಧಗಳಿವೆ ಎಂಬುದು ಇಂದಿಗೂ ಖಚಿತವಾಗಿ ಗೊತ್ತಿಲ್ಲ ಆದರೆ ಹೊಸ ಹೊಸ ಜೀವಿಗಳನ್ನು ಗುರುತಿಸಿ ಪಟ್ಟಿ ಮಾಡುವ ಕಾರ್ಯ ಇಂದಿಗೂ ನಡೆಯುತ್ತಿದೆ. ಕಶೇರುಕಗಳ ಪಟ್ಟಿಗೆ ಹೋಲಿಸಿದರೆ ಅಕಶೇರುಕಗಳ ಪಟ್ಟಿ ಇನ್ನೂ ಅಪೂರ್ಣವೆಂದೇ ಹೇಳಬಹುದು. ಇಂದು ಪಟ್ಟಿಯಾಗಿರುವ 9000 ಪಕ್ಷಿ ಪ್ರಬೇಧಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಭಾಗ 1845ರ ವೇಳೆಗೆ ಗುರುತಿಸಲಾಗಿತ್ತು. 1990 ರ ವೇಳೆಗೆ ಇಂದಿನ 9000 ಪ್ರಬೇಧಗಳ ಪಟ್ಟಿ ಪೂರ್ಣಗೊಳಿಸಲಾಗಿದೆ. ಆದರೆ ಅಕಶೇರುಕಗಳಾದ ಸಂದಿಪದಿಗಳಲ್ಲಿ 130,000 ಪ್ರಬೇಧಗಳು ಇಂದು ಬೆಳಕಿಗೆ ಬಂದಿವೆ. ಅವುಗಳಲ್ಲಿ 1960ರ ವರೆಗೆ ಜೇಡದ ಪ್ರಬೇಧಗಳ ಅರ್ಧದಷ್ಟು ವೈಜ್ಞಾನಿಕ ದಾಖಲೆಯಾಗಿರಲಿಲ್ಲ. 1960 ರಿಂದ 1990, ಕೇವಲ 30 ವರ್ಷಗಳಲ್ಲಿ ಮತ್ತಷ್ಟು ಪ್ರಬೇಧಗಳು ಸೇರ್ಪಡೆಯಾಗಿವೆ. ಹೀಗೆ ಪ್ರತಿಯೊಂದು ಪ್ರಬೇಧವನ್ನೂ ಒರೆ ಹಚ್ಚಿ ಪರೀಕ್ಷಿಸಿದಾಗ ತಿಳಿದುಕೊಳ್ಳಬೇಕಾದ್ದು ಸಾಕಷ್ಟಿದೆ ಎಂಬುದರ ಅರಿವು ಮೂಡಬಲ್ಲದು.
ಜೀವ ಜಗತ್ತಿನಲ್ಲಿರುವ ಪ್ರಾಣಿಗಳ ಒಟ್ಟು ಸಂಖ್ಯೆ ಎಷ್ಟಿರಬಹುದೆಂದು ನಿಖರವಾಗಿ ವಿಜ್ಞಾನಿಗಳು ಹೇಳಲಾರರು. ಬರೀ ಊಹೆ ಮಾಡ ಬಹುದಷ್ಟೇ. ಇಂದು ವಿಜ್ಞಾನದ ಅರಿವಿಗೆ ಬಂದಿರುವ ಒಟ್ಟು ಜೀವಿಗಳ ಸಂಖ್ಯೆ ಸುಮಾರು 1.75 ಮಿಲಿಯನ್. ಕಡಲಾಳ ಹಾಗೂ ಎತ್ತರದ ಮರಗಳ ಮೇಲೆ ವಾಸಿಸುವ ಜೀವಿಗಳ ಸಂಪೂರ್ಣ ಪಟ್ಟಿಯನ್ನು ಮಾಡಲಾಗಿಲ್ಲ. ಹಾಗಾಗಿ ನಮಗೆ ತಿಳಿಯದಿರುವ ಜೀವಿಗಳ ಸಂಖ್ಯೆಯೇ ಹೆಚ್ಚಿರ ಬಹುದೆಂಬ ಊಹೆ ಇದ್ದು ಅದು 100 ಮಿಲಿಯನ್ ಇರಬಹುದೆಂದು ಭಾರಿ ಅಂದಾಜು ಮಾಡಲಾಗಿದೆ. ನಮ್ಮ ಸುತ್ತುಮುತ್ತಲ ತೋಟಗಳಲ್ಲಿ, ರಸ್ತೆಯ ಬದಿಯ ಹೂ ಬಿಡುವ ಸಸ್ಯಗಳ ಬಳಿ ಹಾರಾಡುವ ಬಣ್ಣ ಬಣ್ಣದ, ವಿವಿಧ ಗಾತ್ರದ ಚಿಟ್ಟೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಎಷ್ಟೊಂದು ವಿಧಾವಿಚಿತ್ರ ಚಿಟ್ಟೆಗಳು, ಪತಂಗಗಳಿವೆ ಎಂಬ ಅರಿವು ಮಾಡಬಹುದು.
ಉದಾಹರಣೆ : ಕೀಟ ಪ್ರಪಂಚದಲ್ಲಿ ಪ್ರಬೇಧ ಸಂಖ್ಯಾಬಲದಿಂದ ಎರಡೆನೆಯ ಸ್ಥಾನ ಪಡೆದಿರುವ ಚಿಟ್ಟೆ-ಪತಂಗಗಳ ಬಗೆಗೆ ಹೇಳಬಹುದಾದರೆ ಇವುಗಳ ಒಟ್ಟು ಪ್ರಭೇದಗಳ ಮೊತ್ತ ಸುಮಾರು ಲ1.65 ಲಕ್ಷಗಳು. ಇವುಗಳಲ್ಲಿ 1.25 ಲಕ್ಷದ ಪತಂಗಗಳಿದ್ದರೆ, ಚಿಟ್ಟೆಗಳ ಪ್ರಬೇಧಗಳ ಸಂಖ್ಯೆ 35,000 ಇವುಗಳಲ್ಲಿ ಭಾರತವು 1600 ಪ್ರಭೇದÀಗಳ ಚಿಟ್ಟೆಯನ್ನು ಹೊಂದಿದ್ದರೆ, ಕರ್ನಾಟಕದಲ್ಲಿಯೇ 450-470 ಪ್ರಬೇಧಗಳ ಚಿಟ್ಟೆ-ಪತಂಗಳಿದ್ದು, ಪಶ್ಚಿಮ ಘಟ್ಟಗಳಲ್ಲಿ ಇವುಗಳ ಸಂಖ್ಯೆ ಅಧಿಕವಾಗಿರುವುದು ಕಂಡುಬಂದಿದೆ. ವೈವಿಧ್ಯಮಯ ಸಸ್ಯ ಪ್ರಭೇದಗಳಿರುವ ಬೆಂಗಳೂರು ನಗರದಲ್ಲಿಯೇ ಸುಮಾರು 150 ಪ್ರಭೇದಗಳ ಚಿಟ್ಟೆಗಳನ್ನು ಗುರುತಿಸಲಾಗಿದೆ. ಬಣ್ಣಬಣ್ಣದ ಚಿಟ್ಟೆಗಳ-ಹಾರಾಟ-ಜೀವವೈವಿಧ್ಯ — ದೃಷ್ಟಿಯಿಂದ - ಹೇಗೆ ಪರಿಣಾಮಕಾರಿಯಾಗಬಲ್ಲದೆಂದು ವಿಮರ್ಶಿಸೋಣ. ಚಿಟ್ಟೆಯ ಲಾರ್ವ / ಮರಿಗಳು / ಕಂಬಳಿಹುಳ ಹೊಟ್ಟೆ ಬಾಕಗಳಾದ್ದರಿಂದ ಸಾಕಷ್ಟು ಬೆಳೆ ಹಾನಿ ಮಾಡುವುದೆಂದು ಅದೊಂದು ಹಾನಿಕಾರಕ ಜೀವಿಯೆಂದು ಪರಿಗಣಿಸಿ ಕೀಟನಾಶಕ ಬಳಸುವುದು ಸಾಮಾನ್ಯ. ಆದರೆ ಈ ಅವಸ್ಥೆಯಲ್ಲಿ ಅವು ಅನೇಕ ಇತರ ಜೀವಿಗಳಿಗೆ ಆಹಾರವಾಗಿವೆ. ಹಾಗಾಗಿ ಆಹಾರ ಸರಪಳಿಯ ಮುಖ್ಯ ಕೊಂಡಿಯೆನ್ನಬಹುದು. ಶತ್ರುಗಳಿಂದ ತಪ್ಪಿಸಿಕೊಂಡು ಪ್ರೌಢಾವಸ್ಥೆ ತಲುಪಿತೆಂದರೆ ತನ್ನ ಕೆಲವೇ ದಿನಗಳ ಅಸ್ತಿತ್ವದಲ್ಲಿ ಸಹಸ್ರಾರು ಸಸ್ಯಗಳಲ್ಲಿ ಪರಾಗಸ್ಪರ್ಶ ನಡೆಸಿ ತನ್ನ ಹಾಗೂ ತನ್ನನ್ನೇ ಅವಲಂಬಿಸಿರುವ ಸಸ್ಯಗಳ ಮುಂದಿನ ಪೀಳಿಗೆಗೆ ನಾಂದಿ ಹಾಕಬಲ್ಲವು. ಕುಡಿಕೆಯಂತೆ ಗೂಡುಕಟ್ಟುವ ಕಣಜ ತನ್ನ ಮರಿಗಳಿಗೆ ಆಹಾರ ಒದಗಿಸಲು ನಿರ್ದಿಷ್ಟ ಪ್ರಭೇದದ ಚಿಟ್ಟೆಯ ಕಂಬಳಿಹುಳುವನ್ನು ಗೂಡಿನಲ್ಲಿಟ್ಟು ಮೊಟ್ಟೆಯಿಟ್ಟ ನಂತರ ಗೂಡಿನ ದ್ವಾರ ಮುಚ್ಚುತ್ತದೆ. ಚಿಟ್ಟೆಗಳ ನಾಶದಿಂದ ಅದರ ಮೇಲೆ ನಿರ್ಭರವಾಗಿರುವ ಕಣಜಗಳ ಸಂಖ್ಯೆಯೂ ಇಳಿಮುಖವಾಗುತ್ತಿರುವುದನ್ನು ಗಮನಿಸಲಾಗಿದೆ. ಕೆಲವು ವಿಧದ ಚಿಟ್ಟೆಗಳು ಅನೇಕ ಕಳೆ ಸಸ್ಯಗಳ ಮೇಲೆ ಮೊಟ್ಟೆಯಿಡುವುದರಿಂದ ಅವುಗಳ ಹತೋಟಿಯನ್ನು ಮಾಡಲು ಸಹಕರಿಸುತ್ತವೆ. ಹಕ್ಕಿ, ಹಲ್ಲಿ, ಕಪ್ಪೆಗಳಿಗಂತೂ ಚಿಟ್ಟೆ, ಪತಂಗಗಳು ಅತಿ ಪ್ರಿಯ ಭಕ್ಷ್ಯ, ಪಶ್ಚಿಮ ಘಟ್ಟಗಳಲ್ಲಿ ಕಾಣಬರುವ ಒಂದು ಪ್ರಭೇದದ ಚಿಟ್ಟೆಗೆ ಸರ್ಪಗಂಧಿ ಸಸ್ಯವೇ ಆಶ್ರಯದಾತ. ಈ ಸಸ್ಯದಲ್ಲಿರುವ ಡಿeseಡಿಠಿiಟಿe ಎಂಬ ರಾಸಾಯನಿಕ ವಸ್ತು ಇದರ ಜೀವನ ಕ್ರಮಕ್ಕೆ ಅತಿಮುಖ್ಯ. ಸರ್ಪಗಂಧಿ ಔಷಧೀಯ ಸಸ್ಯವಾಗಿರುವುದರಿಂದ ಅದರ ಲೂಟಿ ಸಾಕಷ್ಟಾಗಿ ಈ ಪ್ರದೇಶದಲ್ಲಿ ಅದು ಅಪರೂಪದ ಸಸ್ಯವಾಗಿ ಪರಿಣಮಿಸಿದೆ. ಹೀಗಾಗಿ ಇದರ ಆಧಾರ ಚಿಟ್ಟೆಗೆ ಲಭ್ಯವಿಲ್ಲ. ಈ ಚಿಟ್ಟೆಯು ತನ್ನ ಅಸ್ತಿತ್ವಕ್ಕೆ ಬೇರೊಂದು ಸಸ್ಯವನ್ನು ಅವಲಂಬಿಸಬೇಕಾಗಿ ಡಿeseಡಿಠಿiಟಿe ವಸ್ತುವನ್ನು ಸಂಶ್ಲೇಷಿಸುವ ಸಸ್ಯವನ್ನು ಆಯ್ದುಕೊಂಡಿದೆ. ಇದನ್ನು ವೀಕ್ಷಿಸಿದ ಕೆಲವು ವಿಜ್ಞಾನಿಗಳು ಚಿಟ್ಟೆಯ ಪತ್ತೆದಾರಿಕೆಯಲ್ಲಿ ಅದರ ಜಾಡಿನ ಮೊರೆ ಹೋಗಬಹುದೆಂದು ಆಶಿಸುತ್ತಿದ್ದಾರೆ. ಹೀಗೆ ಜೀವಿಗಳು ಆಯ್ದುಕೊಳ್ಳುವ ಪರ್ಯಾಯ ವ್ಯವಸ್ಥೆಗಳು ವೈಜ್ಞಾನಿಕ ಸೋಜಿಗಗಳನ್ನು ತೆರೆದಿಡಬಲ್ಲವು. 
ನೀವೆಂದಾದರೂ ಸಮುದ್ರತೀರಕ್ಕೆ ಭೇಟಿ ಕೊಟ್ಟಾಗ, ಅಲ್ಲಿನ ಮರಳಿನಲ್ಲಿ ದೊರಕುವ ಕಪ್ಪೆ ಚಿಪ್ಪುಗಳನ್ನು ಆಯುತ್ತಾ ಹೋದಲ್ಲಿ ವಿಧ ವಿಧದ ಚಿತ್ರ, ಬಣ್ಣ, ಆಕಾರ, ರಚನೆಗಳ ಹಲವಾರು ಚಿಪ್ಪುಗಳನ್ನು ಕೆಲವೇ ಗಂಟೆಗಳಲ್ಲಿ ಸಂಗ್ರಹಿಸಬಲ್ಲಿರಿ.
ಹೀಗೆ ಪ್ರತಿಯೊಂದು ಜೀವಿ ಪ್ರಬೇಧದಲ್ಲೂ ಉಪಪ್ರಬೇಧಗಳನ್ನು ಕಾಣಬಹುದು. ಇಲ್ಲವೇ ಪ್ರತಿಜಾತಿಯಲ್ಲೂ ಅನೇಕ ಪ್ರಭೇದಗಳನ್ನು ಪಟ್ಟಿ ಮಾಡಬಹುದು. ನೆಲವಾಸಿಗಳಲ್ಲೇ ಅತ್ಯಂತ ಗಾತ್ರದ್ದೆನಿಸಿದ ಆನೆಗಳಲ್ಲಿ ಕೇವಲ ಎರಡು ಪ್ರಭೇದಗಳನ್ನು ಗುರುತಿಸಬಹುದು ಒಂದು ಏಷಿಯಾ ಆನೆ ಮತ್ತೊಂದು ಆಫ್ರಿಕಾ ಆನೆ. ಇವುಗಳನ್ನು ಕ್ರಮವಾಗಿ ಎಲಿಫಾಸ್ ಮಾಕ್ಸಿಯಸ್ ಮತ್ತು ಲೊಕ್ಸೊಡಾಂಟಾ ಆಫ್ರಿಕಾನಾ ಎಂದು ವೈಜ್ಞಾನಿಕವಾಗಿ ಹೆಸರಿಸಲಾಗಿದೆ. ಇವುಗಳಲ್ಲಿನ ಪ್ರಮುಖ ವ್ಯತ್ಯಾಸಗಳೆಂದರೆ.

ಲಕ್ಷಣ
ಏಷಿಯಾ ಆನೆ
ಆಫ್ರಿಕಾ ಆನೆ

ಸರಾಸರಿ ಎತ್ತರ
3.2 ರಿಂದ 2.5 ಮೀ
4 ರಿಂದ 2 ಮೀ

ಸರಾಸರಿ ತೂಕ
5400 ರಿಂದ 4000 ಕಿ. ಗ್ರಾಂ.
6000 ದಿಂದ 3000 ಕಿ. ಗ್ರಾಂ

ಸೊಂಡಿಲು
ಕಡಿಮೆ ನೆರಿಗೆಯುಳ್ಳದ್ದು ತುದಿಯಲ್ಲಿ ಒಂದೇ ಬೆರಳು.
ಹೆಚ್ಚು ನೆರಿಗೆಯುಳ್ಳದ್ದು ತುದಿಯಲ್ಲಿ ಎರಡು ಬೆರಳು.

ದಂತ
ಸಲಗಕ್ಕೆ ಮಾತ್ರ ಸೀಮಿತ
ಗಂಡು ಮತ್ತು ಹಣ್ಣಾನೆಗಳೆರಡರಲ್ಲೂ ಕಾಣಬಹುದು.

ಹಣೆ
ಎರಡು ಡಬ್ಬಗಳು
ನುಣುವು ಹಣೆ

ಧರ್ಮ
ನವಿರು
ಸಡಿಲು

ಮುಂಗಾಲಿನ ಊಗುರಿನ ಸಂಖ್ಯೆ.
ಇದು.
ನಾಲ್ಕು

ಕಿವಿ ಹಾಲೆ
ಸಣ್ಣದು, ಭುಜವನ್ನು ಮುಚ್ಚುವುದಿಲ್ಲ.
ಅಗಲ, ಭುಜವನ್ನು ಮುಚ್ಚುವುದು.

ಜೀನೀ ವೈವಿಧ್ಯ ಮತ್ತು ಪ್ರಭೇದ ವೈವಿಧ್ಯಕ್ಕೆ ವಿಷಯ ಸಂಗ್ರಹಣೆ
ಕಾಯಿ ಪಲ್ಲೆ, ಹಣ್ಣುಗಳನ್ನು ಕೊಳ್ಳಲು ಹೋದಾಗ ಕಂಡುಬರುವ ವಿಧಗಳನ್ನು ಗುರುತಿಸಿ.
1. ಹುರುಳಿ ಕಾಯಿ 2. ಟೋಮ್ಯಾಟೋ 3. ಬದನೆ 4. ಸೌತೆಕಾಯಿ. 5. ಕರ್ಬೂಜ 6. ಕಲ್ಲಂಗಡಿ 6. ದ್ರಾಕ್ಷಿ. 7. ಸೇಬು. ಇತ್ಯಾದಿ.
ನಿಮ್ಮ ಹಳ್ಳಿ ಅಥವಾ ಊರಿನಲ್ಲಿ ಗುರುತಿಸಬಹುದಾದ.
1 ನಾಯಿ ವಿಬೇಧಗಳು 2. ಕೋಳಿ 3. ಹಸು. 4. ಮೀನು 5. ಇರುವೆ. 6. ಚಿಟ್ಟೆ 7. ಜೀರುಂಡೆ ಇತ್ಯಾದಿ.
ಜೀವಿಗಳ ಗಾತ್ರಕ್ಕೂ, ಪ್ರಬೇಧಗಳ ಸಂಖ್ಯೆಗೂ ಯಾವುದೇ ಸಾಮ್ಯವಿಲ್ಲ. ಗಾತ್ರ ಮತ್ತು ಸಂಖ್ಯೆಗಳನ್ನು ಪ್ರತಿಬಿಂಬಿಸುವ ರೇಖಾಚಿತ್ರ ತಯಾರಿಸಿದಲ್ಲಿ ಆನೆಯ ಗಾತ್ರ ಕುಗ್ಗುತ್ತದೆ. ಕೀಟಗಳ ಗಾತ್ರ ಹಿಗ್ಗುತ್ತದೆ.
1	ಸ್ತನಿಗಳು ______ 4000
2	ಉಭಯ ಜೀವಿಗಳು ______ 4200
3	ಬ್ಯಾಕ್ಟೀರಿಯಾ ______ 4800
4	ಸ್ಪಂಜುಗಳು ______ 5000
5	ಕಂಟಕ ಚರ್ಮಿಗಳು ______ 6100
6	ಸರೀ ಸೃಪಗಳು ______ 6300
7	ಕುಟುಕು ಕಣವಂತಗಳು ______ 9000
8	ಹಕ್ಕಿಗಳು ______ 9000
9	ವಲಯವಂತಗಳು. ______ 12,000
10	ದುಂಡು ಹುಳುಗಳು ______ 12.000
11	ಚಪ್ಪಟೆ ಹುಳುಗಳು ______ 12.000
12	ಮತ್ಸ್ಯಗಳು ______ 22000
13	ಶೈವಲಗಳು ______ 26.900
14	ಆದಿಮ ಜೀವಿಗಳು ______ 30.800
15	ಶಿಲೀಂದ್ರಗಳು. ______ 69,000
16	ಮೃದ್ವಂಗಿಗಳು ______ 70,000
17	ಕೀಟಗಳನ್ನು ಹೊರತುಪಡಿಸಿದ ಸಂದಿಪದಿಗಳು ______ 123,400
18	ಉನ್ನತ ಸಸ್ಯಗಳು ______ 270,000
19	ಕೀಟಗಳು ______ 751,000
ಪ್ರಾಣಿಗಳಲ್ಲಿ ಅತ್ಯಂತ ಕಡಿಮೆ ಪ್ರಭೇದ ಗುಂಪೆಂದರೆ ಸ್ತನಿಗಳು. ಅತ್ಯಂತ ಹೆಚ್ಚಿನ ಪ್ರಬೇಧಗಳಿರುವುದು. ಕೀಟಗಳು. ಕೀಟಗಳ ವರ್ಗದಲ್ಲಿ ಜೀವಿಗಳದ್ದು ಭಾರಿ ಸಂಖ್ಯೆಯಾದರೆ, ಚಿಟ್ಟೆ ಮತ್ತು ಪತಂಗಗಳಿಗೆ ಎರಡನೆಯ ಸ್ಥಾನ.
ಜೀವಾವಾಸ ಜೀವಿ ವೈವಿಧ್ಯ : - ನೀವು ಬಸ್ಸು, ಕಾರು, ರೈಲು, ಹಡಗು, ವಿಮಾನ - ಹೀಗೆ ಯಾವುದೇ ವಾಹನಗಳಲ್ಲಿ ಬೇರೊಂದು ಸ್ಥಳಕ್ಕೆ ಪಯಣಿಸುವ ಹಾದಿಯಲ್ಲಿ ಪ್ರಕೃತಿಯ ವೈವಿಧ್ಯಮಯ ಚಿತ್ರಣ ಅನುಭವಿಸುವುದು ಸಾಮಾನ್ಯ ಅದೇ ಹಾದಿಯಲ್ಲಿ ಬೇರೆ ಬೇರೆ ಋತುಗಳಲ್ಲಿ ಪಯಣಿಸಿದ್ದರೆ ನಿಮ್ಮ ಅನಿಸಿಕೆ ಮತ್ತು ಅನುಭವಗಳು ಏಕರೀತಿಯಲ್ಲಿರುವುದಿಲ್ಲ. ಇದೇಕೆ ಹೀಗೆ ?
ವಸಂತಕಾಲದಲ್ಲಿ ಮಾವಿನ ಚಿಗುರೊಡೆದಂತೆ ಕೋಗಿಲೆಯು ತನ್ನ ಇನಿದನಿಯಿಂದ ನಿಮ್ಮನ್ನು ಆಕರ್ಷಿಸಬಹುದು. ಮಾವಿನ ಹಣ್ಣಿನ ಕಾಲ ಮುಗಿಯುತ್ತಿದ್ದಂತೆ ಕೋಗಿಲೆ ಅಜ್ಞಾತವಾಗುವುದು. ಅಂದರೆ ಮಾವು ಮತ್ತು ಕೋಗಿಲೆಗೆ ಅವಿನಾಭಾವ ಸಂಬಂಧವಿದೆ. ಒಂದಕ್ಕೊಂದು ಪೂರಕವಾಗಿ ತಮ್ಮ ಜೈವಿಕ ಚಟುವಟಿಕೆ ನಡೆಸುವುವು. ಅಂತೆಯೇ ಈ ಭೂಮಿಯ ಮೇಲಿನ ಎಲ್ಲಾ ಜೀವಿಗಳೂ ಒಂದಿಲ್ಲೊಂದು ರೀತಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತಮ್ಮದೇ ಪರಿಸರದ ಸಂಬಂಧಗಳನ್ನು ಕಲ್ಪಿಸಿಕೊಂಡಿವೆ. ಜೀವಿಗಳ ನಡುವಿನ ಹಾಗೂ ಅವುಗಳ ಪರಿಸರದ ಹೊಂದಾಣಿಕೆಯೇ ಅವುಗಳ ಜೀವಾವಾಸ. (ಜೀವಿಗಳ ಆವಾಸ).
ಈ ಜೀವಾವಾಸಗಳ ಒಟ್ಟಾರೆ ಮೊತ್ತವನ್ನೇ ಜೀವಿಮಂಡಲ ಎನ್ನುತ್ತೇವೆ. ಜೀವ ಮಂಡಲದ ಮುಖ್ಯ ವಾಹಿನಿಗಳೆಂದರೆ ಜಲ ಮತ್ತು ನೆಲ ಇವುಗಳೊಂದಿಗೆ ವಾಯುಗೋಳವನ್ನೂ ಜೀವಿಗಳು ಬಳಸಿಕೊಂಡಿದ್ದರೂ. ಅದು ಅವುಗಳ ಖಾಯಂ ಆವಾಸವಲ್ಲ. ಹೀಗಾಗಿ ಮುಖ್ಯ ವಾಹಿನಿಯ ಜಲ ಮತ್ತು ನೆಲದ ಆಸರೆಗೆ ಅವು ಮರಳುತ್ತವೆ. ಈ ಜೀವ ಮಂಡಲದ ಶೇಕಡ 70 ಭಾಗ ಜಲಾವೃತವಾಗಿದೆ. ಹಾಗೂ ಶೇ 30 ಭಾಗ ನೆಲ ಈ ಜಲಗೋಳದ ಆಳ, ಹರಿವು ಮತ್ತು ರಾಸಾಯನಿಕ ಸಂಯೋಜನೆಯಲ್ಲಿ ವ್ಯತ್ಯಾಸಗಳಿರುದರಿಂದ ಅವನ್ನು ಸಾಗರ ಮತ್ತು ಸಿಹಿ ನೀರು ಜಲವಾಸಗಳೆಂದು ಪರಿಗಣಿಸಬಹುದು. ನೆಲಭಾಗವನ್ನು ಕಾಡು, ಹುಲ್ಲುಗಾವಲು, ಮರುಭೂಮಿ, ಬೆಟ್ಟಗುಡ್ಡ ಪ್ರದೇಶಗಳೆಂದು ವಿಂಗಡಿಸಬಹುದು.

ವೈವಿಧ್ಯತೆಯ ವಿಸ್ತಾರ.
ಆವಾಸ
ಉಪ-ಆವಾಸ
ವಲಯಗಳು

ಸಾಗರ

ಸಿಹಿನೀರು

ನೆಲ (ಭೂ)

ಮುಕ್ತ ಜಲಾವಾಸ

ಕಳ ವಲಯ

ನಿಂತ ನೀರು

ಹರಿವ ನೀರು
ಮೇಲ್ ದ್ಯುತಿ
ಅಂತರ್ ದ್ಯುತಿ
ಇಳಿಜಾರು
ಆತಲ ಪಾತಾಳ ಮುಕ್ತ ಜೀವಿಗಳು
ಅಲೆ ಚಾಚು
ಅಂತರ್ ಭರತ
ಇಳಿಜಾರು
ಮಂದದ್ಯುತಿ
ಅಂಧಕಾರ
ಲಿಟೊರಲ್ / ಅಂಚುವಲಯ
ತಳವಲಯ
ಮೇಲ್‍ದ್ಯುತಿ
ಅಂತರ್ ದ್ಯುತಿ
ಅದ್ಯುತಿ ವಲಯ
ನದಿ, ಝರಿ ಬಗ್ಗೆ
ಕಾಡು
ಸವನ್ನಾ (ಹಲ್ಲುಗಾವಲು)
ಮರುಭೂಮಿ
ಬೆಟ್ಟ-ಗುಡ್ಡ ಪ್ರದೇಶ

1. ಸಮುದ್ರದಂಡೆ : ಸಾಗರ ಮತ್ತು ಭೂಮಿಗಳ (ಸಂಗಮ) ಸಮಾಗಮ ಸ್ಥಾನ. ಸಮುದ್ರದ ಅಲೆಯ ಹೊಡೆತ ಕಾಣಬಹುದು. ಬಂಡೆಯ ತೀರವಾದರೆ. ನೀರಿನ ಸಿಂಪಡಿಕೆ ಇರುತ್ತದೆ.
2. ಅಂತರ ಭರತವಲಯ :- ಏರಿದ ಭರತವಿದ್ದಾಗ ನೀರಿನಿಂದ ತೇಯ್ದು ಇಳಿತದ ಭರತವಿದ್ದಾಗ ನೆಲಕಾಣಬಹುದಾದ ವಲಯ
3. ಇಳಿಜಾರು :- ಭೂ ಖಂಡ ಚಾಚುವಿನ ಭಾಗ. ಕೆಲವೇ ಮೀಟರುಗಳಿಂದ 200 ಮೀಟರ್ ಆಳದ ವರೆವಿಗೂ ಇರಬಹುದು.
4. ಬೇಧಿಯಲ್ ವಲಯ :- 200 ಮೀಟರ್ ಆಳದಿಂದ 2000 ಮೀಟರ್ ಆಳದವರೆಗಿನ ಸಮುದ್ರ ಭಾಗ.
5. ಅಭಿಸಲ್ ವಲಯ :- ಸಮುದ್ರದಾಳದ 3000 ಮೀಟರ್‍ನಿಂದ 7000 ಮೀಟರ್ ಆಳದವರೆಗೆ.
6. ಅಂಧಕಾರ ವಲಯ :- ಸಮುದ್ರದಾಲದಲ್ಲಿ 7000 ಮೀಟರ್‍ಗಳಿಗೂ ಇರುವ ತಳಭಾಗ.
ಯಾವುದೇ ಜಲಾವಾಸದಲ್ಲಿ ಮುಕ್ತ ಮತ್ತು ತಳವಲಯಗಳನ್ನು ಗುರುತಿಸಬಹುದು. ನೀರಿನ ಆಳ ಹೆಚ್ಚಾದಂತೆ ಸೂರ್ಯ ರಶ್ಮಿ ನೀರಿನೊಳಕ್ಕೆ ನುಗ್ಗುವ ಹಾಗೂ ತಳ ಸೇರುವ ಸಂಭವ ಕಡಿಮೆಯಾಗುತ್ತದೆ. ಸೂರ್ಯನ ಬೆಳಕು ಬೇಧಿಸುವ ಆಳಕ್ಕೆ ತಕ್ಕಂತೆ 3 ಮುಖ್ಯ ವಲಯಗಳನ್ನು ಗುರುತಿಸಬಹುದು. ನೆಲಭಾಗಕ್ಕೆ ಹತ್ತಿರವಿರುವ ಭೂಖಂಡ ಚಾಚನ್ನು ನೆರೆಟಿಕ್ ವಲಯ ವೆಂದು ಗುರುತಿಸಿದರೆ ಉಳಿದ ನೀರಿನ ಭಾಗ ಮುಕ್ತ ಜಲಾವಾಸ (ಪೆಲಾಜಿಕ್) ಎಂದು ಹೆಸರಿಸಬಹುದು. ಇಲ್ಲಿ ಮೂರು ಸ್ತರಗಳಲ್ಲಿ ನೀರಿನ ಮಟ್ಟವನ್ನು ವಿವರಿಸಬಹುದು ಅವೇ,
ಮೇಲ್ ದ್ಯುತಿ ಸ್ತರ :- ಇದು ಸುಮಾರು 50 ಮೀಟರ್ ಆಳದವರೆಗೂ ಇರಬಹುದು. ಇಲ್ಲಿ ಸೂರ್ಯರಶ್ಮಿ ನೀರಿನಲ್ಲಿ ತೂರಬಹುದಾದ್ದರಿಂದ ದ್ಯುತಿ ಸಂಶ್ಲೇಷಣಾ ಕ್ರಿಯೆ ಸಾಂಗವಾಗಿ ನಡೆಯಬಲ್ಲದು.
ಅಂತರ್ ದ್ಯುತಿ ಸ್ತರ :- ಈ ಸ್ತರವು ಸುಮಾರು 200 ಮೀಟರ್ ಆಳದವರೆಗೂ ಹಬ್ಬಿರಬಹುದು. ಇಲ್ಲಿ ಸೂರ್ಯ ರಶ್ಮಿ ಮಂದವಾಗಿ ತಲುಪುವುದರಿಂದ ದ್ಯುತಿಸಂಶ್ಲೇಷಣೆಗೆ ಅನುಕೂಲಕರವಲ್ಲ ಹಾಗಾಗಿ ಸ್ವಪಾತಿಗಳಾದ ಸಸ್ಯರಾಶಿ ಕಡಿಮೆ ಜೀವಿಸುತ್ತವೆ.
ಅದ್ಯುತಿ ಸ್ತರ :- ಇಲ್ಲಿಯ ಆಳತ್ಮನುಗುಣವಾಗಿ ಮಂದ ಬೆಳಕಿನ, ಅಂಧಕಾರದ ಉಪ ಸ್ತರಗಳನ್ನು ಕಾಣಬಹುದು.
ಜಲಾವಾಸದ ತಳಭಾಗವು ಮರಳು, ಜೇಡಿ ಅಥವಾ ಎರಡರ ಬೆರಕೆ, ಬಂಡೆ - ಹೀಗೆ ವ್ಯತ್ಯಾಸಗಳನ್ನು ತೋರಬಹುದು. ಹಾಗಾಗಿ ನೀರಿನ ವ್ಯತ್ಯಾಸಗಳೊಂದಿಗೆ ಅಲ್ಲಿಯ ಭೌತಿಕ ಲಕ್ಷಣಗಳೂ ವ್ಯತ್ಯಯಗೊಳ್ಳುತ್ತವೆ.
ನೆಲಾವಾಸ :- ಜಾಗು ಪ್ರದೇಶದಿಂದ ಮರುಭೂಮಿ ಮತ್ತು ಬೆಟ್ಟಗುಡ್ಡ ಪ್ರದೇಶಗಳವರೆಗೂ ಹರಡಿರಬಹುದು. ಇಲ್ಲಿ ಮಣ್ಣಿನ ಮೇಲ್ಪದರ ಹಾಗೂ ಒಳ ಪದರಗಳಲ್ಲಿ ಅನೇಕ ವ್ಯತ್ಯಾಸಗಳಿರುತ್ತವೆ. ನೆಲದ ಮೇಲ್ಮೈನಲ್ಲಿ ವಾಸಿಸುವ ಜೀವಿಗಳಲ್ಲದೇ ಭೂಮಿಯೊಳಗೆ ವಾಸಿಸುವ ಜೀವಿಗಳ ಜೀವನ ಮತ್ತು ಚಟುವಟಿಕೆ ಜೀವಾವಾಸದ ಪ್ರಮುಖ ಅಂಶವಾಗಬಲ್ಲದು.
ಕೇಂಬ್ರಿಯನ್, ಆರ್ಡೋವಿಶಿಯನ್ ಮತ್ತು ಸೈಲ್ಯೂರಿಯನ್ ಪೀರಿಯಡ್‍ಗಳು
ಕೇಂಬ್ರಿಯನ್ — ಎಂದರೆ ನೀಲಹಸಿರು - ಶೈವಲಗಳ ಹೊರತಾಗಿ ನೆಲಸಸ್ಯಗಳು ಇಲ್ಲದೇ ಹವಳ, ಟ್ರೈಲೋಬೈಟ್ ಮತ್ತು ಕಂಟಕ ಚರ್ಮಿಗಳ ರಾಜ್ಯವಾಗಿತ್ತು. ಈ ಪ್ರಾಗ್ಜೀವಿಕಲ್ಪದ ಸೈಲ್ಯೂರಿಯನ್ ಪೀರಿಯಡ್‍ನಲ್ಲಿ ಮೊದಲ ನೆಲಸಸ್ಯಗಳು ಕಾಣಿಸಿಕೊಂಡವು.
ಈ ಮೇಲಿನ ಎರಡೂ ವಿಧಗಳಲ್ಲಿ ಅಕ್ಷಾಂಶ, ರೇಖಾಂಶ, ಆಳ, ಎತ್ತರ, ಹವಾಗುಣ, ಮತ್ತು ಭೌಗೋಳಿಕ ವ್ಯತ್ಯಾಸಗಳನ್ನು ಕಾಣಬಹುದು. ಒಂದೇ ಜೀವಾವಾಸದಲ್ಲಿಯೂ ಕಾಲ ಮತ್ತು ದೇಶಕ್ಕೆ ತಕ್ಕಂತಹ ವ್ಯತ್ಯಾಸಗಳನ್ನು ಗುರುತಿಸಬಹುದು. ಪ್ರದೇಶದಿಂದ ಪ್ರದೇಶಕ್ಕೆ ಜೀವ ಪ್ರಭೇದಗಳ ವ್ಯತ್ಯಾಸವಿರುವುದಲ್ಲದೇ, ಕಾಲಕಾಲಕ್ಕೂ ಆದ ಬದಲಾವಣೆಗಳಾಗಿರುವುದನ್ನು ಕಾಣಬಹುದು. ಇದನ್ನು ಕಾಲಾನುಸಾರ ಜೀವಿ ವೈವಿಧ್ಯ ಎಂದು ಪರಿಗಣಿಸಬಹುದು.
ಪ್ರದೇಶದಿಂದ ಪ್ರದೇಶಕ್ಕೆ ಜೀವಿಗಳ ಹಂಚಿಕೆ ಮತ್ತು ವೈವಿಧ್ಯದಲ್ಲಿ ಬದಲಾವಣೆಗಳಿರುವುದನ್ನು ಅರಿಯಲು ಒಂದು ಉದಾಹರಣೆ ನೋಡಿ. ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲೊಂದು ಪುಟ್ಟ ಗ್ರಾಮವಿದೆ. ಅದೇ ಮಾಲಾಗ್ರಾಮ. ಈ ಗ್ರಾಮವು ತೇವ ಕಾಡು, ಕೃಷಿ, ಜಲ ಜೀವಾವಾಸಗಳೆಲ್ಲವನ್ನೂ ಹೊಂದಿದ್ದು ಪಕ್ಷಿ ವೈವಿಧ್ಯದ ತೌರೂರೆನ್ನ ಬಹುದು. ಈ ಗ್ರಾಮವು ವಿಸ್ತೀರ್ಣದಲ್ಲಿ ಲೆಕ್ಕ ಹಾಕಿದರೆ ಚದರ ಕಿಲೋಮೀಟರ್ ಲೆಕ್ಕದಲ್ಲಿ ಭಾರತದ 600 ನೇ 1/600 ಒಂದು ಭಾಗವಾಗಿದೆ. ಭಾರತದಲ್ಲಿ ದಾಖಲಾಗಿರುವ ಒಟ್ಟು ಹಕ್ಕಿಗಳ ಪ್ರಭೇದಗಳ ಸಂಖ್ಯೆಗೆ ಹೋಲಿಸಿದರೆ ಈ ಪುಟ್ಟ ಗ್ರಾಮದಲ್ಲಿ ಶೇ 10 ರಷ್ಟು ಸಂಖ್ಯೆಯ ಪ್ರಭೇದದ ಹಕ್ಕಿಗಳಿವೆ. ಇದೇ ಬಗೆಯ ಜೀವಿ ವೈವಿಧ್ಯ ಕರ್ನಾಟಕದೆಲ್ಲೆಡೆ ಕಾಣಸಿಗದು.

ಸ್ಥಳ
ವಿಸ್ತೀರ್ಣ
(ಚದರ ಕಿ.ಮೀ.)
ಪಕ್ಷಿಪ್ರಬೇಧಗಳ
ಸಂಖ್ಯೆ

ಮಾಲಾ ಗ್ರಾಮ
ಕಾರ್ಕಳ ತಾಲ್ಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
ಭಾರತ
50
1000
10000
19,2000
30,00,000
120
200
360
400
1176

ಭಾರತದ ಪಕ್ಷಿ ಪ್ರಭೇದಗಳ ಸಂಖ್ಯೆಗೆ ಹೋಲಿಸಿದರೆ ರಾಜ್ಯದ ಒಂದು ಸಣ್ಣ ಗ್ರಾಮದಲ್ಲಿನ ಸಂಖ್ಯೆ ವೈವಿಧ್ಯ ದೃಷ್ಟಿಯಿಂದ ಪ್ರಮುಖ ತಾಣವಾಗಿದೆ.
ಇದರಂತೆ ಜೀವ ಮಂಡಲದ ಬೇರೆ ಬೇರೆ ಪ್ರದೇಶಗಳ ಪ್ರಭೇದಗಳ ಸಂಖ್ಯೆಗಳನ್ನು ಅವುಗಳ ಹಂಚಿಕೆಯನ್ನು ಗಮನಿಸಿದರೆ, ಉಷ್ಣವಲಯದ ಕಾಡುಗಳಲ್ಲಿ ಪ್ರಭೇದ ಮತ್ತು ಸಂಖ್ಯಾ ವೈವಿಧ್ಯವಿರುವಷ್ಟು ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದ ಕಡೆಗೆ ಹೋದಂತೆ ಕಡಿಮೆಯಾಗುವುದನ್ನು ಕಾಣಬಹುದು. ಹಾಗಾಗಿ ಉಷ್ಣವಲಯದ ಕಾಡುಗಳು ಜೀವಿ ವೈವಿಧ್ಯದ ತಾಣಗಳೆನ್ನಬಹುದು.
1988ರಲ್ಲಿ ಬ್ರಿಟಿಷ್ ಪರಿಸರ ತಜ್ಞ ನಾರ್ಮನ್ ಮೆಯರ್ಸ್ ಇಂತಹ 18 ಸಮೃದ್ಧ ತಾಣಗಳನ್ನು ಗುರುತಿಸಿ ಅವನ್ನು "ಊoಣ, sಠಿoಣs" ಎಂದು ಕರೆದ. 2000ದ ಫೆಬ್ರವರಿ ನೇಚರ್ ಪತ್ರಿಕೆಯಲ್ಲಿ ಅಂತಹ 25 ತಾಣಗಳನ್ನು ಗುರುತಿಸಿದ. 1998 ರಲ್ಲಿ WW  ಜೀವ ವೈವಿದ್ಯ  ಊoಣ, sಠಿoಣsಗಳ ಸಂರಕ್ಷಣೆಗಾಗಿ "ಉಟobಚಿಟ zoo" ಎಂಬ ಯೋಜನೆಯೊಂದು ಸಿದ್ಧಪಡಿಸಿ ಭೂ, ಜಲಾವಾಸಗಳಲ್ಲಿನ ಪ್ರಮುಖ ಜೀವಾವಾಸಗಳ ರಕ್ಷಣೆಯನ್ನು ಜಾಗತಿಕ ಮಟ್ಟದಲ್ಲಿ ನಡೆಸುವ ಕಾರ್ಯಕ್ರಮಗಳನ್ನು ರೂಪಿಸಿದೆ.
ಜಗತ್ತಿನ  25 ಜೀವ ವೈವಿಧ್ಯ ತಾಣಗಳು ಪೈಕಿ ಭಾರತದ ಎರಡು ಶ್ರೀಮಂತ ಭಂಡಾರಗಳೂ ಸೇರಿರುವುದು ಹೆಮ್ಮೆ ಪಡಬಹುದಾದಂತಹ ವಿಷಯ. ಆ ಎರಡು ಕಾಣಗಳೆಂದರೆ, ಪೂರ್ವ ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳು.

ಜಗತ್ತು
ಭಾರತ 
ಕರ್ನಾಟಕ

ಉನ್ನತ ಸಸ್ಯಗಳು 
248429
17000
4000

ಅಕಶೇರುಕಗಳು 
1173000
76309
22000

ಮೀನುಗಳು
18910
2546
800

ಉಭಯಜೀವಿಗಳು
4222
206
80

ಸರಿಸೃಪಗಳು
6458
408
160

ಹಕ್ಕಿಗಳು
9040
1300
500

ಸ್ತನಿಗಳು
4629
400
120

ಹವಳದ ದಿಬ್ಬಗಳು ಕಟುಕ ಕಣವಂತ ವಂಶಕ್ಕೆ ಸೇರಿದ ಅಕಶೇರುಕ ಜೀವಿ ಸೃಷ್ಠಿಸುತ್ತದೆ. ಈ ಸಣ್ಣ ಜೀವಿಗಳನ್ನು 'ಹವಳ ಪಾಲಿಪ್ ಎನ್ನುತ್ತೇವೆ. ಈ ಪ್ರಾಣಿಗಳ ಬಾಯಿಯ ಸುತ್ತಾ ಟೆಂಟಶೆಲ್ಸ್ ಎಂದರೆ ಗ್ರಹಣಾಂಗಳಿರುತ್ತವೆ. ಇದನ್ನು ಬಳಸಿ ಅವು ಆಹಾರ ಸೇವಿಸುವುವು. ಕಡಲ ನೀರಿನಲ್ಲಿರುವ ಕ್ಯಾಲ್ಸಿಯಂ ಕಾರ್ಬೋನೇಟ್ ಬಳಸಿಕೊಂಡು ಕೇರಲೈಟ್ ಎಂಬ ರಕ್ಷಣಾ ಕವಚಗಳನ್ನು ನಿರ್ಮಿಸಿಕೊಳ್ಳುತ್ತವೆ. ಮೃದುವಾದ ಜೀವಿ ಸತ್ತರೂ ಅದರ ಗಟ್ಟಿ ಕವಚ ಹಾಗೆಯೇ ಉಳಿಯುವುದರಿಂದ ದೊಡ್ಡ ದೊಡ್ಡ ಹವಳದ ದಿಬ್ಬಗಳುಂಟಾಗುತ್ತವೆ.
ಹವಳದ ದಿಬ್ಬಗಳಲ್ಲಿ ನಾಲ್ಕು ಬಗೆಗಳನ್ನು ಗುರುತಿಸಬಹುದು. ಅವೇ,
1. ಅಂಚು ದಿಬ್ಬಗಳು (ಈಡಿiಟಿgiಟಿg ಖeeಜಿ)-ಅಂಡಮಾನ್, ನಿಕೋಬಾರ್.
2. ಪಟ್ಟ್ ದಿಬ್ಬಗಳು (Pಚಿಣಛಿh ಖeeಜಿ)
3. ಬ್ಯಾರಿಯರ್ ದಿಬ್ಬಗಳು (ಃಚಿಡಿಡಿieಡಿ ಖeeಜಿ).-ಆಸ್ಟ್ರೇಲಿಯಾ.
4. ಅಟೇಲ್‍ಗಳು(ಂಣoಟಟ). ಉದಾ:- ಲಕ್ಷದ್ವೀಪ.
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ